ನೀನೇನಾ..?

ನಿನ್ನ ನೆನಪು..

ನವಿಲು ಗರಿ ತಾಕಿದ ಹಾಗೆ
ರೇಷ್ಮೆಗಿಂತ  ನವಿರು..

ತಂಗಾಳಿ ಬೀಸಿದ ಹಾಗೆ
ಸುಳಿದಷ್ಟೂ ರೋಮಾಂಚನ..

ಸೋನೆ ಮಳೆ ಹನಿಸಿದ ಹಾಗೆ
ಮನಸೆಲ್ಲ ಒದ್ದೆ ಒದ್ದೆ..

ಹಸುಗೂಸಿನ ಮುಗ್ಧ ನಗುವಿನ ಹಾಗೆ
ಕಂಗಳಲ್ಲಿ ನೂರು ದೀಪಾವಳಿ..

ಕಾಡೋ ತುಂಟ ಮುಂಗುರುಳ ಹಾಗೆ
ತಾಕಿದಷ್ಟೂ ಕಾಮನೆಗಳ ಜಾತ್ರೆ..

ಚಂದನದ ಕಂಪಿನ ಹಾಗೆ
ಸುಂದರ ಸಂಜೆಗಳ ಸಂಗಾತಿ..

ಮಲ್ಲಿಗೆಯ ಘಮದ ಹಾಗೆ
ಹೆರಳಿಗೂ ಸ್ಪರ್ಶದ ಕಾತರ..

ಹೂ ಮೈಯ್ಯ ನೇವರಿಸಿದ ಹಾಗೆ
ದುಂಬಿಗೀಗ ಹೊಟ್ಟೆಕಿಚ್ಚು..

ಕಡುಗಪ್ಪು ಕಂಗಳ ಮಿಂಚಿನ ಹಾಗೆ
ಒಂದೆಳೆ ಕಾಡಿಗೆಗೂ ಕೌತುಕ..

ಆ ಕಂಗಳಲ್ಲಿರೋ ಚಿತ್ರ ನಿಂದೇನಾ..??


ಆ ಮಿಂಚಿಗೆ ಕಾರಣ ನೀನೇನಾ..??

6 ಕಾಮೆಂಟ್‌ಗಳು:

  1. ತುಂಬಾ ಆಪ್ತವಾಗೋ ಸಾಲುಗಳು

    ನಿನ್ನ ನೆನಪಿನ ನೀನು ಯಾರು :)

    ಪ್ರತ್ಯುತ್ತರಅಳಿಸಿ
  2. ಭಾವನೆಗಳ ಭಾವನೆಯಲ್ಲಿ ಮಿಂದಂತೆ ಆಯಿತು... ಚೆನ್ನಾಗಿದೆ !!!

    ಪ್ರತ್ಯುತ್ತರಅಳಿಸಿ
  3. ಭಾವನಾಸಾಗರದುಬ್ಬರಕೆ ಲೇಖನಿಯೊಂದೇ ಹಾಯಿದೋಣಿ! ಧನ್ಯವಾದಗಳು ಮಹೇಶ್, ಗುರು ಹಾಗು ಗಿರೀಶ್.. :)

    ಪ್ರತ್ಯುತ್ತರಅಳಿಸಿ
  4. ದೀಪಿಕಾ, ಮಿತ್ರ ನಾಗ್ ನ ಪೆನ್ನು ಪೇಪರ್ ಮೂಲಕ ನಿಮ್ಮಲ್ಲಿ ಬಂದೆ ..ನಿಜಕ್ಕೂ ಸರಳ ಸುಂದರ ಸಾಲುಗಳ ಭಾವ ಮಂಥನ...
    ಅದರಲ್ಲೂ
    ಕಾಡೋ ತುಂಟ ಮುಂಗುರುಳ ಹಾಗೆ
    ತಾಕಿದಷ್ಟೂ ಕಾಮನೆಗಳ ಜಾತ್ರೆ..

    ಪ್ರತ್ಯುತ್ತರಅಳಿಸಿ
  5. ನಿಮ್ಮ ಕಾವ್ಯ ಅದು ಇಬ್ಬನಿಯ ಹಾಗೆ ಅಲ್ಲಿ ಎಲ್ಲವು ಇದೆ ಹಾಗೆಯೇ ಏನು ಇಲ್ಲ .ನಿಮ್ಮ ಒಳಗಿನ ಮನಸು ಅದರ ತುಡಿತ,ಭಾವನೆಗಳ ಚೆಲ್ಲಾಟ ,ಅದಕ್ಕೂ ಹೆಚ್ಚಾಗಿ ನಿಮ್ಮ ಅಂತರಂಗದ ತೊಳಲಾಟ ನನಗೆ ತುಂಬಾ ತುಂಬಾ ಇಸ್ತವಾಯ್ತು

    ಪ್ರತ್ಯುತ್ತರಅಳಿಸಿ