ಪಯಣ...

ಮಧುರ ನೆನಪುಗಳ
ನೀ ಕೊಂಡು ಹೋಗಿ
ಮನಸೆಲ್ಲ ಬರಿದು...


ಕಹಿ ನೆನಪುಗಳು
ಕೊಲ್ಲುತಿವೆ ಹೃದಯವ
ಇನ್ನಿಲ್ಲದಂತೆ ಇರಿದು..


ಸ್ನಿಗ್ದತೆ, ಕಣ್ಮಿಂಚು,
ಹೂನಗು,
ಮುದ್ದು ಮುಖದಿಂದ
ದೂರ ಸರಿದು...


ನೀನಿಲ್ಲದ ಹೃದಯ
ಜೀವವಿಲ್ಲದ ದೇಹ
ಹೊರಟಿದೆ ಶೂನ್ಯದೆಡೆ
ಬರಿಗಾಲಲಿ ನಡೆದು..